Google ನಿಂದ ಹೋಟೆಲ್ ಸೆಂಟರ್

ಸೇವಾ ನಿಯಮಗಳು

 

Google ನಿಂದ ಹೋಟೆಲ್ ಸೆಂಟರ್‌ಗಾಗಿ ಈ ನಿಯಮಗಳನ್ನು (“ನಿಯಮಗಳು”) Google LLC (“Google”) ಹಾಗೂ ಈ ನಿಯಮಗಳನ್ನು ಕಾರ್ಯಗತಗೊಳಿಸುವ ಅಥವಾ ಈ ನಿಯಮಗಳಿಗೆ ಎಲೆಕ್ಟ್ರಾನಿಕ್ ರೂಪದಲ್ಲಿ ಸಮ್ಮತಿಸುವ ಘಟಕದ (“ಪ್ರಯಾಣ ಪಾಲುದಾರರು”) ನಡುವೆ ಮಾಡಿಕೊಳ್ಳಲಾಗುತ್ತಿದೆ.  (i) ಈ ನಿಯಮಗಳಿಗೆ ಸಂಬಂಧಿಸಿದ ಹಾಗೆ ಪ್ರಯಾಣ ಪಾಲುದಾರರಿಗೆ ನೀಡಲಾದ ಖಾತೆಯ(ಗಳ) (“ಖಾತೆಗಳು”) ಮೂಲಕ ಪ್ರವೇಶ ಪಡೆಯಲಾಗುವ ಅಥವಾ (ii) ಉಲ್ಲೇಖದ ಮೂಲಕ ಈ ನಿಯಮಗಳನ್ನು ಅಳವಡಿಸಿಕೊಳ್ಳುವ (ಸಮಗ್ರವಾಗಿ, “ಹೋಟೆಲ್ ಸೆಂಟರ್”) ಸಂಬಂಧಿತ ಸೇವೆಗಳು, ಫೀಚರ್‌ಗಳು ಮತ್ತು ಕಾರ್ಯಚಟುವಟಿಕೆಯೂ (“ಸೇವೆಗಳು”) ಸೇರಿದ ಹಾಗೆ ಪ್ರಯಾಣ ಪಾಲುದಾರರು Google ಹೋಟೆಲ್ ಸೆಂಟರ್ ಅನ್ನು ಬಳಸುವುದು ಈ ನಿಯಮಗಳಿಗೆ ಒಳಪಟ್ಟಿರುತ್ತದೆ.  

 

1. ಹೋಟೆಲ್ ಸೆಂಟರ್ ಬಳಸುವುದು.  ಪ್ರಯಾಣ ಪಾಲುದಾರರು Google API ಗಳ ಮೂಲಕವೂ ಸೇರಿದ ಹಾಗೆ ವಿವಿಧ ವಿಧಾನಗಳ ಮೂಲಕ ಹೋಟೆಲ್ ಸೆಂಟರ್‌ಗೆ ಡೇಟಾ, ಫೀಡ್‌ಗಳು ಅಥವಾ ಇತರ ಕಂಟೆಂಟ್ (“ಕಂಟೆಂಟ್”) ಅನ್ನು ಸಲ್ಲಿಸಬಹುದು. ಪ್ರಯಾಣ ಪಾಲುದಾರರಿಗೆ Google ಲಭ್ಯಗೊಳಿಸಿದ ಯಾವುದೇ ಸೂಚನೆಗಳು ಅಥವಾ ಸ್ಪೆಸಿಫಿಕೇಶನ್‌ಗಳನ್ನು ಅನುಸರಿಸುವ ರೀತಿಯಲ್ಲಿ ಕಂಟೆಂಟ್ ಅನ್ನು ಸಲ್ಲಿಸಲು ಪ್ರಯಾಣ ಪಾಲುದಾರರು ಒಪ್ಪುತ್ತಾರೆ. ಪ್ರಯಾಣ ಪಾಲುದಾರರು ಹೋಟೆಲ್ ಸೆಂಟರ್‌ನಿಂದ ಕಂಟೆಂಟ್ ಅನ್ನು ಬೇರೊಂದು Google ಸೇವೆಗೆ ರಫ್ತು ಮಾಡಲು, ಲಿಂಕ್ ಮಾಡಲು, ವರ್ಗಾಯಿಸಲು ಅಥವಾ ಅನ್ಯಥಾ ಆ ಸೇವೆಯ ಮೂಲಕ ಬಳಸಲು ಅನುಮತಿಸುವ ಕಾರ್ಯಚಟುವಟಿಕೆಯನ್ನು Google ಲಭ್ಯಗೊಳಿಸಬಹುದು. ಆ ಸಂದರ್ಭದಲ್ಲಿ, ಪ್ರಯಾಣ ಪಾಲುದಾರರು ಆ ಸೇವೆಯನ್ನು ಬಳಸುವುದಕ್ಕೆ ಅಂತಹ ಇತರ Google ಸೇವೆಯ ನಿಯಮಗಳು ಮತ್ತು ನಿಬಂಧನೆಗಳು ಅನ್ವಯವಾಗುತ್ತವೆ, ಆದರೆ ಪ್ರಯಾಣ ಪಾಲುದಾರರ ಹೋಟೆಲ್ ಸೆಂಟರ್ ಬಳಸುವಿಕೆಯು ಈ ನಿಯಮಗಳಿಗೆ ಒಳಪಟ್ಟಿರುತ್ತದೆ. ಪ್ರಯಾಣ ಪಾಲುದಾರರು ಕೆಲವೊಂದು ಐಚ್ಛಿಕ ಹೋಟೆಲ್ ಸೆಂಟರ್ ಸೇವೆಗಳನ್ನು ಬಳಸಲು ಆಯ್ಕೆ ಮಾಡಿದರೆ, ಆ ಸೇವೆಗಳಿಗೆ ನಿರ್ದಿಷ್ಟವಾದ ಪ್ರತ್ಯೇಕ ನಿಯಮಗಳಿಗೆ ಪ್ರಯಾಣ ಪಾಲುದಾರರು ಸಮ್ಮತಿಸಬೇಕಾಗಬಹುದು.  ಕೆಲವು ಹೋಟೆಲ್ ಸೆಂಟರ್ ಸೇವೆಗಳನ್ನು “ಬೀಟಾ” ಎಂಬುದಾಗಿ ಅಥವಾ ಅನ್ಯಥಾ ಬೆಂಬಲವಿಲ್ಲ ಅಥವಾ ಗೌಪ್ಯ (“ಬೀಟಾ ಫೀಚರ್‌ಗಳು”) ಎಂಬುದಾಗಿ ಗುರುತಿಸಲಾಗಿರುತ್ತದೆ.  ಪ್ರಯಾಣ ಪಾಲುದಾರರು ಬೀಟಾ ಫೀಚರ್‌ಗಳಿಂದ ಅಥವಾ ಬೀಟಾ ಫೀಚರ್‌ಗಳ ಕುರಿತು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸುವಂತಿಲ್ಲ ಅಥವಾ ನಿಯಮಗಳು ಅಥವಾ ಸಾರ್ವಜನಿಕವಲ್ಲದ ಯಾವುದೇ ಬೀಟಾ ಫೀಚರ್‌ಗಳ ಉಪಸ್ಥಿತಿಯನ್ನು ಬಹಿರಂಗಪಡಿಸುವಂತಿಲ್ಲ.  ಬೀಟಾ ಫೀಚರ್‌ಗಳು ಸೇರಿದ ಹಾಗೆ ಸೇವೆಗಳನ್ನು, Google ಅಥವಾ ಅದರ ಅಫಿಲಿಯೇಟ್‌ಗಳು ಯಾವಾಗ ಬೇಕಾದರೂ ಅಮಾನತುಗೊಳಿಸಬಹುದು, ಮಾರ್ಪಡಿಸಬಹುದು ಅಥವಾ ಸ್ಥಗಿತಗೊಳಿಸಬಹುದು.  ಈ ನಿಯಮಗಳ ಉದ್ದೇಶಕ್ಕಾಗಿ, “ಅಫಿಲಿಯೇಟ್” ಎಂದರೆ Google ಅನ್ನು ನೇರವಾಗಿ ಅಥವಾ ಪರೋಕ್ಷವಾಗಿ ನಿಯಂತ್ರಿಸುವ, Google ನಿಂದ ನಿಯಂತ್ರಿಸಲ್ಪಡುವ ಅಥವಾ ಕಾಲಕಾಲಕ್ಕೆ Google ನೊಂದಿಗೆ ಸಾಮಾನ್ಯ ನಿಯಂತ್ರಣದ ಅಡಿಯಲ್ಲಿರುವ ಯಾವುದೇ ಸಂಸ್ಥೆಯಾಗಿದೆ.

 

2. ಖಾತೆ.  ಪ್ರಯಾಣ ಪಾಲುದಾರರು ಹೋಟೆಲ್ ಸೆಂಟರ್ ಅನ್ನು ಬಳಸುವುದು, ಒಂದು ಅಥವಾ ಹೆಚ್ಚು ಖಾತೆಯ(ಗಳ) ರಚನೆ ಮತ್ತು Google ನಿಂದ ಅನುಮೋದನೆಗೆ ಒಳಪಟ್ಟಿರುತ್ತದೆ.  ಖಾತೆಗಳನ್ನು ದೃಢೀಕರಿಸಲು ಮತ್ತು ಕಾಲಕಾಲಕ್ಕೆ, Google ಗೆ ಹೆಚ್ಚುವರಿ ಮಾಹಿತಿಯ ಅಗತ್ಯವಿರಬಹುದು; ಇದರಲ್ಲಿ ಕಾನೂನುಬದ್ಧ ಘಟಕದ ಹೆಸರು, ಒದಗಿಸುವ ವ್ಯಾಪಾರ, ಪ್ರಾಥಮಿಕ ಸಂಪರ್ಕ, ಫೋನ್ ಸಂಖ್ಯೆ, ವಿಳಾಸ ಮತ್ತು ಸೂಕ್ತ ಡೊಮೇನ್‌ಗಳು ಸೇರಿರುತ್ತವೆ. ಖಾತೆಗಳಿಗೆ ಎಲ್ಲಾ ಪ್ರವೇಶಗಳು ಮತ್ತು ಬಳಕೆ, ಖಾತೆಗಳ ಮೂಲಕ ಹೋಟೆಲ್ ಸೆಂಟರ್‌ಗೆ ಸಲ್ಲಿಸಿದ ಕಂಟೆಂಟ್ ಮತ್ತು ಖಾತೆಯ ಬಳಕೆದಾರರ ಹೆಸರುಗಳು ಹಾಗೂ ಪಾಸ್‌ವರ್ಡ್‌ಗಳ ರಕ್ಷಣೆಯೂ ಸೇರಿದ ಹಾಗೆ ಪ್ರಯಾಣ ಪಾಲುದಾರರು ಹೋಟೆಲ್ ಸೆಂಟರ್ ಅನ್ನು ಬಳಸುವುದಕ್ಕೆ ತಾವೇ ಜವಾಬ್ದಾರರಾಗಿರುತ್ತಾರೆ.

 

3. ನೀತಿಗಳು

a. ಪ್ರಯಾಣ ಪಾಲುದಾರರು ಹೋಟೆಲ್ ಸೆಂಟರ್ ಅನ್ನು ಬಳಸುವುದು ಈ ಕೆಳಗಿನವುಗಳಿಗೆ ಒಳಪಟ್ಟಿರುತ್ತದೆ (i)  ಕಾಲಕಾಲಕ್ಕೆ Google ಮಾರ್ಪಡಿಸಬಹುದಾದ, https://support.google.com/hotelprices/topic/11077677 ನಲ್ಲಿ ಲಭ್ಯವಿರುವ, ಅನ್ವಯಿಸುವ Google ನೀತಿಗಳು ಮತ್ತು ಪ್ರಯಾಣ ಪಾಲುದಾರರಿಗೆ Google ಲಭ್ಯಗೊಳಿಸಿರುವ ಇತರ ಎಲ್ಲಾ ನೀತಿಗಳು (ಸಮಗ್ರವಾಗಿ, “ನೀತಿಗಳು”), (ii) ಈ ನಿಯಮಗಳು ಮತ್ತು (iii) ಅನ್ವಯಿಸುವ ಕಾನೂನಿನೊಂದಿಗೆ(ಗಳೊಂದಿಗೆ) ಪ್ರಯಾಣ ಪಾಲುದಾರರ ಅನುಸರಣೆ. 

b. ಹೋಟೆಲ್ ಸೆಂಟರ್‌ಗೆ ಸಂಬಂಧಿಸಿದ ಹಾಗೆ, (i) google.com/policies/privacy ನಲ್ಲಿ ಲಭ್ಯವಿರುವ (ಕಾಲಕಾಲಕ್ಕೆ ಮಾರ್ಪಡಿಸಿದ ಹಾಗೆ) Google ಗೌಪ್ಯತೆ ನೀತಿಯನ್ನುGoogle ಅನುಸರಿಸುತ್ತದೆ ಮತ್ತು (ii) ಅನ್ವಯಿಸುವ ಮಟ್ಟಿಗೆ, https://privacy.google.com/businesses/gdprcontrollerterms/ ನಲ್ಲಿರುವ Google ಕಂಟ್ರೋಲರ್-ಕಂಟ್ರೋಲರ್ ಡೇಟಾ ಸುರಕ್ಷತಾ ನಿಯಮಗಳನ್ನು (“ಡೇಟಾ ಸಂರಕ್ಷಣೆ ನಿಯಮಗಳು”) Google ಹಾಗೂ ಪ್ರಯಾಣ ಪಾಲುದಾರರು ಒಪ್ಪುತ್ತಾರೆ.  ಡೇಟಾ ಸಂರಕ್ಷಣೆ ನಿಯಮಗಳ ಅಡಿಯಲ್ಲಿ ಪ್ರತ್ಯೇಕವಾಗಿ ಅನುಮತಿಸಿರುವುದನ್ನು ಹೊರತುಪಡಿಸಿ, ಡೇಟಾ ಸಂರಕ್ಷಣೆ ನಿಯಮಗಳನ್ನು Google ಮಾರ್ಪಡಿಸುವುದಿಲ್ಲ.

 

4. ಪ್ರಯಾಣ ಪಾಲುದಾರರ ಕಂಟೆಂಟ್.

a. Google ಅಥವಾ ಅದರ ಅಫಿಲಿಯೇಟ್‌ಗಳ ಉತ್ಪನ್ನಗಳು ಹಾಗೂ ಸೇವೆಗಳಿಗೆ ಸಂಬಂಧಿಸಿದ ಹಾಗೆ ಕಂಟೆಂಟ್ ಅನ್ನು ಬಳಸಲು (ಬೌದ್ಧಿಕ ಆಸ್ತಿ ಹಕ್ಕುಗಳ ರಕ್ಷಣೆ ಇರುವ ಮಟ್ಟಿಗೆ), ಪ್ರಯಾಣ ಪಾಲುದಾರರು ಈ ಮೂಲಕ Google ಹಾಗೂ ಅದರ ಅಫಿಲಿಯೇಟ್‌ಗಳಿಗೆ ಶಾಶ್ವತವಾದ, ಹಿಂಪಡೆಯಲಾಗದ, ಜಾಗತಿಕ, ಉಚಿತ ಪರವಾನಗಿಯನ್ನು ನೀಡುತ್ತಾರೆ. ನಮಗಾಗಿ ಸೇವೆಗಳನ್ನು ಕಾರ್ಯಗತಗೊಳಿಸುವ ನಮ್ಮ ಗುತ್ತಿಗೆದಾರರಿಗೆ ಮತ್ತು Google ನ ಅಥವಾ ಅದರ ಅಫಿಲಿಯೇಟ್‌ಗಳ ಉತ್ಪನ್ನಗಳು ಹಾಗೂ ಸೇವೆಗಳನ್ನು ಉಪಯೋಗಿಸುವುದಕ್ಕೆ ಸಂಬಂಧಿಸಿದ ಹಾಗೆ ಬಳಕೆದಾರರು ಇಂತಹ ಕಂಟೆಂಟ್ ಅನ್ನು ಬಳಸಲು ಸಾಧ್ಯವಾಗುವಂತೆ Google ಮತ್ತು ಅದರ ಅಫಿಲಿಯೇಟ್‌ಗಳು ಈ ಹಕ್ಕುಗಳನ್ನು ಉಪ-ಪರವಾನಗಿ ನೀಡಬಹುದೆಂದು ಪ್ರಯಾಣ ಪಾಲುದಾರರು ಒಪ್ಪುತ್ತಾರೆ.

b. ಪ್ರಯಾಣ ಪಾಲುದಾರರು ಸಲ್ಲಿಸಿದ ಕಂಟೆಂಟ್‌ನಲ್ಲಿ URL ಗಳು ಅಥವಾ ಅಂತಹ ಕಂಟೆಂಟ್ ಇದ್ದರೆ, URL ಅನ್ನು(ಗಳನ್ನು) ಮತ್ತು ಅಂತಹ URL ನ(ಗಳ) ಮೂಲಕ ಲಭ್ಯವಿರುವ ಕಂಟೆಂಟ್ (“ಗಮ್ಯಸ್ಥಾನಗಳು”) ಅನ್ನು ಪ್ರವೇಶಿಸುವ, ಸೂಚಿಕೆ ಮಾಡುವ, ಕ್ಯಾಷ್ ಮಾಡುವ ಅಥವಾ ಕ್ರಾಲ್ ಮಾಡುವ ಹಕ್ಕನ್ನು ಪ್ರಯಾಣ ಪಾಲುದಾರರು ಈ ಮೂಲಕ Google ಮತ್ತು ಅದರ ಅಫಿಲಿಯೇಟ್‌ಗಳಿಗೆ ಒದಗಿಸುತ್ತಾರೆ.  ಉದಾಹರಣೆಗೆ, ಇಂತಹ URL ಗಳಿಗೆ ಸಂಬಂಧಿಸಿದ ವೆಬ್‌ಸೈಟ್‌ಗಳನ್ನು ಪಡೆದುಕೊಳ್ಳಲು ಮತ್ತು ವಿಶ್ಲೇಷಿಸಲು Google ಒಂದು ಸ್ವಯಂಚಾಲಿತ ಸಾಫ್ಟ್‌ವೇರ್ ಪ್ರೋಗ್ರಾಂ ಅನ್ನು ಬಳಸಬಹುದು.  Google ಅಥವಾ ಅದರ ಅಫಿಲಿಯೇಟ್‌ಗಳು ಗಮ್ಯಸ್ಥಾನಗಳಿಂದ ಸಂಗ್ರಹಿಸುವ ಯಾವುದೇ ಕಂಟೆಂಟ್ ಅನ್ನು ಕಂಟೆಂಟ್ ಎಂಬುದಾಗಿ ಪರಿಗಣಿಸಲಾಗುತ್ತದೆ ಮತ್ತು ಈ ನಿಯಮಗಳ ಅನುಸಾರ ಅದೇ ಪ್ರಕಾರವಾಗಿ ನಿರ್ವಹಿಸಲಾಗುತ್ತದೆ ಎಂಬುದಕ್ಕೆ ಪ್ರಯಾಣ ಪಾಲುದಾರರು ಸಮ್ಮತಿಸುತ್ತಾರೆ.

c. ಹೋಟೆಲ್ ಸೆಂಟರ್ ಅನ್ನು ಬಳಸುವ ಮೂಲಕ, ಕಂಟೆಂಟ್ ಅನ್ನು Google ಅಧಿಕೃತವಾಗಿ ಬಳಸುವುದಕ್ಕೆ ಸಂಬಂಧಿಸಿದ ಹಾಗೆ, ಯಾವುದೇ ಟ್ರೇಡ್‌ಮಾರ್ಕ್‌ಗಳು, ಸೇವೆ ಗುರುತುಗಳು, ವಾಣಿಜ್ಯ ಹೆಸರುಗಳು, ಒಡೆತನದ ಲೋಗೋಗಳು, ಡೊಮೇನ್ ಹೆಸರುಗಳು ಮತ್ತು ಇತರ ಯಾವುದೇ ಮೂಲ ಅಥವಾ ವ್ಯವಹಾರ ಗುರುತುಗಳನ್ನು ಬಳಸಲು ಪ್ರಯಾಣ ಪಾಲುದಾರರು Google ಗೆ ಅಧಿಕಾರ ನೀಡುತ್ತಾರೆ.

 

5. ಪರೀಕ್ಷಿಸುವುದು.  ಪ್ರಯಾಣ ಪಾಲುದಾರರು Google ಹಾಗೂ ಅದರ ಅಫಿಲಿಯೇಟ್‌ಗಳಿಗೆ ಈ ಕೆಳಗಿನ ಅಧಿಕಾರಗಳನ್ನು ನೀಡುತ್ತಾರೆ (a) ಪ್ರಯಾಣ ಪಾಲುದಾರರಿಗೆ ಸೂಚನೆ ನೀಡದೆಯೇ, ಪ್ರಯಾಣ ಪಾಲುದಾರರು ಸೇವೆಗಳನ್ನು ಬಳಸುವುದರ ಮೇಲೆ ಪ್ರಭಾವ ಬೀರಬಹುದಾದ (ಗಮ್ಯಸ್ಥಾನಗಳು, ಗುಣಮಟ್ಟ, ರ್ಯಾಂಕಿಂಗ್‌, ಕಾರ್ಯಕ್ಷಮತೆ, ಫಾರ್ಮ್ಯಾಟಿಂಗ್ ಅಥವಾ ಇತರ ಹೊಂದಾಣಿಕೆಗಳಿಗೆ ಸಂಬಂಧಪಟ್ಟಿರುವುದು ಸೇರಿದ ಹಾಗೆ) ಪರೀಕ್ಷೆಗಳನ್ನು ಕಾಲಕಾಲಕ್ಕೆ ನಡೆಸುವುದು, ಮತ್ತು (b) ಗಮ್ಯಸ್ಥಾನಗಳನ್ನು ಸ್ವಯಂಚಾಲಿತವಾಗಿ ಪಡೆದುಕೊಳ್ಳುವುದು ಮತ್ತು ವಿಶ್ಲೇಷಿಸುವುದು, ಮತ್ತು ಅವುಗಳಿಗೆ ಪ್ರವೇಶ ಪಡೆಯಲು ಪರೀಕ್ಷಾ ರುಜುವಾತುಗಳನ್ನು ರಚಿಸುವುದು.

 

6. ವಾರಂಟಿ, ಹಕ್ಕುಗಳು ಮತ್ತು ಹೊಣೆಗಾರಿಕೆಗಳು.  ಪ್ರಯಾಣ ಪಾಲುದಾರರು ಈ ಕೆಳಗಿನವುಗಳಿಗೆ ಪ್ರಾತಿನಿಧ್ಯ ನೀಡುತ್ತಾರೆ ಮತ್ತು ಸಮರ್ಥಿಸುತ್ತಾರೆ (a) ಈ ನಿಯಮಗಳನ್ನು ಒಪ್ಪಿಕೊಳ್ಳಲು ಪ್ರಯಾಣ ಪಾಲುದಾರರು ಸಂಪೂರ್ಣ ಸಾಮರ್ಥ್ಯ ಹಾಗೂ ಅಧಿಕಾರವನ್ನು ಹೊಂದಿದ್ದಾರೆ, (b) ವಿಭಾಗ 4 ರಲ್ಲಿ ಹೇಳಿದ ಪರವಾನಗಿಗಳು ಹಾಗೂ ಅನುಮತಿಗಳನ್ನು ಒದಗಿಸುವ ಹಕ್ಕುಗಳು ಪ್ರಯಾಣ ಪಾಲುದಾರರಿಗೆ ಸೇರಿರುತ್ತವೆ ಮತ್ತು ಅವರೇ ಅದನ್ನು ನಿರ್ವಹಿಸುತ್ತಾರೆ, (c) ನೀತಿಗಳು, ಅನ್ವಯಿಸುವ ಕಾನೂನು ಅಥವಾ ಅನ್ವಯಿಸುವ ಯಾವುದೇ ಗೌಪ್ಯತೆ ನೀತಿಗಳನ್ನು ಉಲ್ಲಂಘಿಸುವ, ಅಥವಾ ಥರ್ಡ್ ಪಾರ್ಟಿ ಬೌದ್ಧಿಕ ಆಸ್ತಿಯ ಹಕ್ಕುಗಳನ್ನು ಅತಿಕ್ರಮಿಸುವ ಯಾವುದೇ ಕಂಟೆಂಟ್ ಅನ್ನು ಪ್ರಯಾಣ ಪಾಲುದಾರರು ಒದಗಿಸುವುದಿಲ್ಲ, (d) ಒಬ್ಬ ವ್ಯಕ್ತಿಯಿಂದ ಅಥವಾ ಒಬ್ಬ ವ್ಯಕ್ತಿಯ ಕುರಿತಾಗಿ ಸಂಗ್ರಹಿಸಲಾದ, ಅನ್ವಯಿಸುವ ಡೇಟಾ ಗೌಪ್ಯತೆ ಅಥವಾ ಡೇಟಾ ಸಂರಕ್ಷಣೆ ಕಾನೂನುಗಳು ಅಥವಾ ನಿಯಮಗಳ ಅಡಿಯಲ್ಲಿ ರಕ್ಷಣೆಗೆ ಒಳಪಡುವ ಯಾವುದೇ ಮಾಹಿತಿಯನ್ನು Google ಗೆ ಲಭ್ಯಗೊಳಿಸಲು ಪ್ರಯಾಣ ಪಾಲುದಾರರು ಎಲ್ಲಾ ಅಗತ್ಯ ಹಕ್ಕುಗಳು ಹಾಗೂ ಸಮ್ಮತಿಗಳನ್ನು ಹೊಂದಿದ್ದಾರೆ, ಮತ್ತು (e) ಪ್ರಯಾಣ ಪಾಲುದಾರರು ಒದಗಿಸಿದ ಮಾಹಿತಿ ಮತ್ತು ಅಧಿಕಾರಗಳು (ಪ್ರಯಾಣ ಪಾಲುದಾರರ ಆಫರ್‌ಗಳನ್ನು ಪ್ರದರ್ಶಿಸಲು ಅಗತ್ಯವಿರುವ, ಉತ್ಪನ್ನಕ್ಕೆ ಸಂಬಂಧಿಸಿದ ಎಲ್ಲಾ ಅಗತ್ಯ ಪ್ರಕಟಣೆಗಳು ಸೇರಿದ ಹಾಗೆ) ಪೂರ್ಣವಾಗಿವೆ, ಸರಿಯಾಗಿವೆ ಮತ್ತು ಪ್ರಸ್ತುತವಾಗಿವೆ ಮತ್ತು ಹಾಗೆಯೇ ಉಳಿಯುತ್ತವೆ.

 

7. ಹಕ್ಕು ನಿರಾಕರಣೆಗಳು.  ಕಾನೂನಿನಿಂದ ಅನುಮತಿಸಲ್ಪಟ್ಟ ಪೂರ್ಣ ಪರಿಮಿತಿಯವರೆಗೆ, GOOGLE ಹಾಗೂ ಅದರ ಅಫಿಲಿಯೇಟ್‌ಗಳು,   ಪರೋಕ್ಷ, ಶಾಸನಾತ್ಮಕ ಅಥವಾ ಅನ್ಯಥಾ, ಅತಿಕ್ರಮಿಸದಿರುವಿಕೆ, ತೃಪ್ತಿಕರ ಗುಣಮಟ್ಟ, ವಿಕ್ರಯ ಯೋಗ್ಯತೆಗಾಗಿ ಅಥವಾ ಯಾವುದೇ ಉದ್ದೇಶಕ್ಕೆ ಹೊಂದಿಕೊಳ್ಳುವಿಕೆಗಾಗಿ ಮಾತ್ರವಲ್ಲದೆ ಯಾವುದೇ ವ್ಯವಹಾರ ಅಥವಾ ವಾಣಿಜ್ಯ ಬಳಕೆಯ ಯಾವುದೇ ವಿಧಾನದಿಂದ ಉತ್ಪನ್ನವಾಗುವ ಯಾವುದೇ ವಾರಂಟಿಗಳು ಸೇರಿದ ಹಾಗೆ, ಎಲ್ಲಾ ವಾರಂಟಿಗಳ ಹಕ್ಕುಗಳನ್ನು ನಿರಾಕರಿಸುತ್ತಾರೆ.  ಕಾನೂನಿನಿಂದ ಅನುಮತಿಸಲ್ಪಟ್ಟ ಪೂರ್ಣ ಪರಿಮಿತಿಯವರೆಗೆ, ಹೋಟೆಲ್ ಸೆಂಟರ್ ಹಾಗೂ ಅದರ ಸಂಬಂಧಿತ ಸೇವೆಗಳನ್ನು “ಇದ್ದ ಹಾಗೆ” “ಲಭ್ಯವಿರುವ ಹಾಗೆ” ಮತ್ತು “ಎಲ್ಲಾ ದೋಷಗಳೊಂದಿಗೆ” ಒದಗಿಸಲಾಗಿದೆ ಮತ್ತು ವ್ಯಾಪಾರಿಯು ತಮ್ಮದೇ ಜವಾಬ್ದಾರಿಯ ಮೇಲೆ ಅವುಗಳನ್ನು ಬಳಸುತ್ತಾರೆ. ಹೋಟೆಲ್ ಸೆಂಟರ್ ಅಥವಾ ಅದಕ್ಕೆ ಸಂಬಂಧಿಸಿದ ಸೇವೆಗಳು, ಅಥವಾ ಅವುಗಳಿಂದಾಗಿ ಉದ್ಭವಿಸುವ ಯಾವುದೇ ಫಲಿತಾಂಶಗಳಿಗೆ ಸಂಬಂಧಪಟ್ಟ ಹಾಗೆ, Google ಮತ್ತು ಅದರ ಅಫಿಲಿಯೇಟ್‌ಗಳು ಯಾವುದೇ ಭರವಸೆಗಳನ್ನು ನೀಡುವುದಿಲ್ಲ. GOOGLE ಮತ್ತು ಅದರ ಅಫಿಲಿಯೇಟ್‌ಗಳು, ನ್ಯೂನತೆಗಳು ಅಥವಾ ದೋಷಗಳ ಕುರಿತು ವ್ಯಾಪಾರಿಗೆ ತಿಳಿಸುವ ವಾಗ್ದಾನ ಮಾಡುವುದಿಲ್ಲ. 

 

8. ಬಾಧ್ಯತೆಯ ಪರಿಮಿತಿ.  ಕಾನೂನಿನಿಂದ ಅನುಮತಿಸಲ್ಪಟ್ಟ ಪೂರ್ಣ ಪರಿಮಿತಿಯವರೆಗೆ, ಸಿದ್ಧಾಂತ ಅಥವಾ ಕ್ಲೈಮ್‌ನ ಪ್ರಕಾರವನ್ನು ಅವಲಂಬಿಸದೆ, (A) ಈ ನಿಯಮಗಳ ಅಡಿಯಲ್ಲಿ ಅಥವಾ ಈ ನಿಯಮಗಳಿಂದ ಉದ್ಭವಿಸುವ ಅಥವಾ ಈ ನಿಯಮಗಳ ಕಾರ್ಯಗತಗೊಳಿಸುವಿಕೆಗೆ ಸಂಬಂಧಿಸಿದಂತೆ ಉದ್ಭವಿಸುವ ನೇರ ಹಾನಿಗಳನ್ನು ಹೊರತುಪಡಿಸಿ, ಇತರ ಯಾವುದೇ ಹಾನಿಗಳಿಗೆ, ಆ ಇತರ ರೀತಿಯ ಹಾನಿಗಳ ಸಾಧ್ಯತೆ ಇರುವುದು GOOGLE ಅಥವಾ ಅದರ ಯಾವುದೇ ಅಫಿಲಿಯೇಟ್‌ಗಳಿಗೆ ತಿಳಿದಿದ್ದರೂ ಅಥವಾ ತಿಳಿದಿರಬೇಕಾಗಿದ್ದರೂ, ಮತ್ತು ನೇರ ಹಾನಿಗಳು ಪರಿಹಾರದ ಮೂಲಕ ಬಗೆಹರಿಯುವ ಮಾನದಂಡವನ್ನು ಪೂರೈಸದಿದ್ದರೂ ಸಹ, GOOGLE ಮತ್ತು ಅದರ ಅಫಿಲಿಯೇಟ್‌ಗಳನ್ನು ಬಾಧ್ಯಸ್ಥರಾಗುವುದಿಲ್ಲ; ಮತ್ತು (B) ಯಾವುದೇ ಈವೆಂಟ್ ಅಥವಾ ಸಂಬಂಧಿತ ಈವೆಂಟ್‌ಗಳ ಸರಣಿಗೆ ಈ ನಿಯಮಗಳು ಅಥವಾ ಇವುಗಳಿಂದ ಉದ್ಭವಿಸುವ ಅಥವಾ ಈ ನಿಯಮಗಳ ಕಾರ್ಯಗತಗೊಳಿಸುವಿಕೆಯಿಂದ ಉದ್ಭವಿಸುವ, ಒಟ್ಟು USD $5,000.00 ಕ್ಕಿಂತ ಹೆಚ್ಚಿನ ಹಾನಿಗಳಿಗೆ GOOGLE ಹಾಗೂ ಅದರ ಅಫಿಲಿಯೇಟ್‌ಗಳನ್ನು ಬಾಧ್ಯಸ್ಥರನ್ನಾಗಿಸಲು ಸಾಧ್ಯವಿಲ್ಲ.

 

9. ಪರಿಹಾರ ನೀಡುವಿಕೆ.  ಅನ್ವಯಿಸುವ ಕಾನೂನು ಅನುಮತಿಸುವ ಮಟ್ಟಿಗೆ, ಪ್ರಯಾಣ ಪಾಲುದಾರರ ಕಂಟೆಂಟ್, ಗಮ್ಯಸ್ಥಾನಗಳು, ಹೋಟೆಲ್ ಸೆಂಟರ್‌ನ ಬಳಕೆ, ಅದರ ಸಂಬಂಧಿತ ಸೇವೆಗಳ ಬಳಕೆ ಅಥವಾ ಪ್ರಯಾಣ ಪಾಲುದಾರರು ಈ ನಿಯಮಗಳನ್ನು ಉಲ್ಲಂಘಿಸುವುದರಿಂದ ಉದ್ಭವಿಸುವ ಅಥವಾ ಅದಕ್ಕೆ ಸಂಬಂಧಿಸಿದ ಥರ್ಡ್-ಪಾರ್ಟಿ ಕಾನೂನು ಕ್ರಮಗಳಿಗೆ ಸಂಬಂಧಪಟ್ಟ ಎಲ್ಲಾ ಬಾಧ್ಯತೆಗಳು, ಹಾನಿಗಳು, ನಷ್ಟಗಳು, ವೆಚ್ಚಗಳು, ಶುಲ್ಕಗಳು (ಕಾನೂನು ಶುಲ್ಕಗಳು ಸೇರಿದ ಹಾಗೆ) ಮತ್ತು ಖರ್ಚುಗಳ ವಿರುದ್ಧ ಪ್ರಯಾಣ ಪಾಲುದಾರರು Google, ಅದರ ಅಫಿಲಿಯೇಟ್‌ಗಳು, ಏಜೆಂಟ್‌ಗಳು ಮತ್ತು ಪರವಾನಗಿದಾರರನ್ನು ರಕ್ಷಿಸುತ್ತಾರೆ ಮತ್ತು ಪರಿಹಾರ ಒದಗಿಸುತ್ತಾರೆ.

 

10. ಕೊನೆಗೊಳಿಸುವಿಕೆ.  ಈ ಕೆಳಗಿನ ಸಂದರ್ಭಗಳಲ್ಲಿ ಪ್ರಯಾಣ ಪಾಲುದಾರರು ಹೋಟೆಲ್ ಸೆಂಟರ್, ಸೇವೆಗಳು ಅಥವಾ ಖಾತೆಯನ್ನು(ಗಳನ್ನು) ಪ್ರವೇಶಿಸುವುದು, ಬಳಸುವುದನ್ನು ನಿರ್ಬಂಧಿಸುವ, ಅಮಾನತುಗೊಳಿಸುವ ಅಥವಾ ಕೊನೆಗೊಳಿಸುವ (ಸಂಪೂರ್ಣವಾಗಿ ಅಥವಾ ಭಾಗಶಃ) ಹಕ್ಕನ್ನು Google ಕಾಯ್ದಿರಿಸಿಕೊಂಡಿದೆ (a) ಪ್ರಯಾಣ ಪಾಲುದಾರರು ಈ ನಿಯಮಗಳು, ಯಾವುದೇ ನೀತಿಗಳು ಅಥವಾ ಅನ್ವಯಿಸುವ ಕಾನೂನನ್ನು(ಗಳನ್ನು) ಉಲ್ಲಂಘಿಸಿದರೆ, (b) ಕಾನೂನು ಅವಶ್ಯಕತೆ ಅಥವಾ ನ್ಯಾಯಾಲಯದ ಆದೇಶವನ್ನು ಅನುಸರಿಸುವುದಕ್ಕಾಗಿ Google ಇದನ್ನು ಮಾಡುವ ಅಗತ್ಯವಿದ್ದರೆ ಅಥವಾ (c) ಪ್ರಯಾಣ ಪಾಲುದಾರರ ನಡವಳಿಕೆಯು ಬೇರೊಬ್ಬ ಪ್ರಯಾಣ ಪಾಲುದಾರ, ಥರ್ಡ್-ಪಾರ್ಟಿ ಅಥವಾ Google ಗೆ ಹಾನಿ ಉಂಟುಮಾಡುತ್ತದೆ ಎಂದು Google ಸಕಾರಣವಾಗಿ ನಂಬಿದ್ದರೆ. ಹೋಟೆಲ್ ಸೆಂಟರ್, ಸೇವೆಗಳು ಅಥವಾ ಖಾತೆಗೆ(ಗಳಿಗೆ) ತಮ್ಮ ಪ್ರವೇಶವು ತಪ್ಪಾಗಿ ನಿರ್ಬಂಧಿತವಾಗಿದೆ, ಅಮಾನತಾಗಿದೆ ಅಥವಾ ಕೊನೆಗೊಳಿಸಲಾಗಿದೆ ಎಂದು ಪ್ರಯಾಣ ಪಾಲುದಾರರು ಭಾವಿಸಿದರೆ, ನಮ್ಮ ನೀತಿಗಳಲ್ಲಿರುವ ಮೇಲ್ಮನವಿ ಪ್ರಕ್ರಿಯೆಯನ್ನು ನೋಡಿ. ತಮ್ಮ ಖಾತೆಯನ್ನು(ಗಳನ್ನು) ಮುಚ್ಚುವ ಮೂಲಕ ಮತ್ತು ಹೋಟೆಲ್ ಸೆಂಟರ್‌ನ ಬಳಕೆಯನ್ನು ಸ್ಥಗಿತಗೊಳಿಸುವ ಮೂಲಕ, ಪ್ರಯಾಣ ಪಾಲುದಾರರು ಯಾವಾಗ ಬೇಕಾದರೂ ಈ ನಿಯಮಗಳನ್ನು ಕೊನೆಗೊಳಿಸಬಹುದು.

 

11. ನಿಯಮಗಳಲ್ಲಿ ಬದಲಾವಣೆಗಳು.  Google ಯಾವುದೇ ಸೂಚನೆ ನೀಡದೆ ಈ ನಿಯಮಗಳಲ್ಲಿ ಗಮನಾರ್ಹವಲ್ಲದ ಬದಲಾವಣೆಗಳನ್ನು ಮಾಡಬಹುದು, ಆದರೆ ಈ ನಿಯಮಗಳಲ್ಲಿ ಗಮನಾರ್ಹವಾದ ಬದಲಾವಣೆಗಳನ್ನು ಮಾಡುವಾಗ Google, ಮುಂಚಿತ ಸೂಚನೆಯನ್ನು ಒದಗಿಸುತ್ತದೆ. ನಿಯಮಗಳಲ್ಲಿ ಮಾಡುವ ಬದಲಾವಣೆಗಳು, ಹಿಂದಿನ ದಿನಾಂಕದಿಂದ ಜಾರಿಯಾಗುವ ಹಾಗೆ ಅನ್ವಯವಾಗುವುದಿಲ್ಲ ಮತ್ತು ಈ ಪುಟದಲ್ಲಿ ಪೋಸ್ಟ್ ಮಾಡಿದ 7 ದಿನಗಳ ನಂತರ ಜಾರಿಯಾಗುತ್ತವೆ. ಆದರೂ, ಕಾನೂನು ಕಾರಣಗಳಿಗಾಗಿ ಅಥವಾ ತುರ್ತು ಸನ್ನಿವೇಶಗಳಲ್ಲಿ (ನಡೆಯುತ್ತಿರುವ ಶೋಷಣೆಯನ್ನು ತಡೆಯುವಂತಹ ಸಂದರ್ಭಗಳು) ಮಾಡಿದ ಬದಲಾವಣೆಗಳು ಸೂಚನೆ ನೀಡಿದ ತಕ್ಷಣದಿಂದಲೇ ಜಾರಿಯಾಗುತ್ತವೆ.

 

12. ಆಡಳಿತಾತ್ಮಕ ಕಾನೂನು; ವಿವಾದ ಪರಿಹಾರ. ಈ ನಿಯಮಗಳಿಂದ ಅಥವಾ ಇದಕ್ಕೆ ಸಂಬಂಧಪಟ್ಟ ಹಾಗೆ ಉದ್ಭವಿಸುವ ಎಲ್ಲಾ ಕ್ಲೈಮ್‌ಗಳು ಕ್ಯಾಲಿಫೋರ್ನಿಯಾದ ಕಾನೂನು ನಿಯಮಗಳ ವೈರುಧ್ಯಗಳನ್ನು ಹೊರತುಪಡಿಸಿ, ಕ್ಯಾಲಿಫೋರ್ನಿಯಾದ ಕಾನೂನು ವ್ಯಾಪ್ತಿಗೆ ಒಳಪಟ್ಟಿರುತ್ತವೆ ಹಾಗೂ ಮತ್ತು ಯುಎಸ್ಎಯ ಕ್ಯಾಲಿಫೋರ್ನಿಯಾದ ಸಾಂಟಾ ಕ್ಲಾರಾ ಕೌಂಟಿಯ ಫೆಡರಲ್ ಅಥವಾ ರಾಜ್ಯ ನ್ಯಾಯಾಲಯಗಳಲ್ಲಿ ಪ್ರತ್ಯೇಕವಾಗಿ ಮೊಕದ್ದಮೆಗೊಳಪಡಿಸಲಾಗುತ್ತದೆ; ಸಂಬಂಧಪಟ್ಟ ಪಕ್ಷಗಳು ಈ ನ್ಯಾಯಾಲಯಗಳಲ್ಲಿ ವೈಯಕ್ತಿಕ ನ್ಯಾಯವ್ಯಾಪ್ತಿಗೆ ಸಮ್ಮತಿಸುತ್ತಾರೆ.  ಪ್ರಯಾಣ ಪಾಲುದಾರರು ಅನ್ವಯಿಸುವ ನ್ಯಾಯವ್ಯಾಪ್ತಿಯಲ್ಲಿದ್ದರೆ, ಈ ನಿಯಮಗಳು ಅಥವಾ ಹೋಟೆಲ್ ಸೆಂಟರ್‌ಗೆ ಸಂಬಂಧಪಟ್ಟ ಹಾಗೆ Google ನೊಂದಿಗೆ ಉದ್ಭವಿಸುವ ಒಂದು ವಿವಾದವನ್ನು, ಪ್ರಯಾಣ ಪಾಲುದಾರರು ಮಧ್ಯಸ್ಥಿಕೆಯ ಮೂಲಕ ಪರಿಹರಿಸಲು ಸಹ ಅರ್ಜಿ ಸಲ್ಲಿಸಬಹುದು. ನಾವು ತೊಡಗಿಸಿಕೊಳ್ಳಲು ಒಪ್ಪುವ ಮಧ್ಯವರ್ತಿಗಳ ಕುರಿತು ಮತ್ತು ಮಧ್ಯಸ್ಥಿಕೆಯನ್ನು ವಿನಂತಿಸುವುದು ಹೇಗೆ ಎಂಬ ಕುರಿತಾದ ಸೂಚನೆಗಳ ಹೆಚ್ಚಿನ ವಿವರಗಳನ್ನು ಇಲ್ಲಿ ನೋಡಿ. ಅನ್ವಯಿಸುವ ಕಾನೂನಿನ ಅವಶ್ಯಕತೆಯ ಹೊರತಾಗಿ, ಮಧ್ಯಸ್ಥಿಕೆಯು ಸ್ವಯಂ-ಇಚ್ಛೆಗೆ ಬಿಟ್ಟ ವಿಷಯವಾಗಿರುತ್ತದೆ ಮತ್ತು ವಿವಾದಗಳನ್ನು ಮಧ್ಯಸ್ಥಿಕೆಯ ಮೂಲಕ ಬಗೆಹರಿಸಲು ಪ್ರಯಾಣ ಪಾಲುದಾರರು ಅಥವಾ Google ಬಾಧ್ಯಸ್ಥರಾಗಿರುವುದಿಲ್ಲ.

 

13. ಇತರೆ. (a) ಈ ನಿಯಮಗಳು, ತಮ್ಮ ವಿಷಯ ವಸ್ತುವಿಗೆ ಸಂಬಂಧಪಟ್ಟಂತೆ ಪಕ್ಷಗಳ ಸಂಪೂರ್ಣ ಒಪ್ಪಂದವಾಗಿರುತ್ತವೆ ಮತ್ತು ಪ್ರಯಾಣ ಪಾಲುದಾರರು ಈ ನಿಯಮಗಳಿಗೆ ಸಮ್ಮತಿಸಿದ ಬಳಿಕ ಹೋಟೆಲ್ ಸೆಂಟರ್‌ಗೆ ಸಲ್ಲಿಸಿದ ಕಂಟೆಂಟ್‌ಗಾಗಿ Google ಹಾಗೂ ಪ್ರಯಾಣ ಪಾಲುದಾರರ ನಡುವಿನ ಯಾವುದೇ ಕಂಟೆಂಟ್ ಲೈಸೆನ್ಸ್ ಒಪ್ಪಂದ(ಗಳು) ಸೇರಿದಂತೆ, ಆ ವಿಷಯಗಳ ಕುರಿತಾದ, ಈ ಹಿಂದಿನ ಅಥವಾ ಏಕಕಾಲದಲ್ಲಿ ಜರುಗುವ ಯಾವುದೇ ಒಪ್ಪಂದಗಳನ್ನು ಇವು ರದ್ದುಗೊಳಿಸುತ್ತವೆ. (b) ಈ ನಿಯಮಗಳು ವಿಚಾರ ಮಾಡಿದ ಸಂಬಂಧದ ಬಗ್ಗೆ ಪ್ರಯಾಣ ಪಾಲುದಾರರು ಯಾವುದೇ ಸಾರ್ವಜನಿಕ ಹೇಳಿಕೆಯನ್ನು ನೀಡುವಂತಿಲ್ಲ (ಕಾನೂನಿನ ಅವಶ್ಯಕತೆಯ ಹೊರತಾಗಿ). (c) ವಿಭಾಗ 11 ರ ಅಡಿಯಲ್ಲಿ, Google ಈ ನಿಯಮಗಳಲ್ಲಿ ಮಾಡುವ ಮಾರ್ಪಾಡುಗಳನ್ನು ಹೊರತುಪಡಿಸಿ, ಈ ನಿಯಮಗಳಲ್ಲಿ ಮಾಡಲಾಗುವ ಯಾವುದೇ ತಿದ್ದುಪಡಿಯನ್ನು ಎರಡೂ ಪಕ್ಷಗಳು ಒಪ್ಪಬೇಕು ಮತ್ತು ತಾವು ಈ ನಿಯಮಗಳಲ್ಲಿ ತಿದ್ದುಪಡಿ ಮಾಡುತ್ತಿದ್ದೇವೆ ಎಂದು ಪ್ರತ್ಯೇಕವಾಗಿ ಸೂಚಿಸಬೇಕು. (d) ಕೊನೆಗೊಳಿಸುವಿಕೆ ಅಥವಾ ಉಲ್ಲಂಘನೆಯ ಕುರಿತಾದ ಎಲ್ಲಾ ಸೂಚನೆಗಳು ಲಿಖಿತವಾಗಿರಬೇಕು ಹಾಗೂ ಮತ್ತೊಂದು ಪಕ್ಷದ ಕಾನೂನು ವಿಭಾಗವನ್ನು ಸಂಬೋಧಿಸಬೇಕು (ಅಥವಾ ಮತ್ತೊಂದು ಪಕ್ಷವು ಕಾನೂನು ವಿಭಾಗವನ್ನು ಹೊಂದಿದೆಯೇ ಎಂದು ತಿಳಿದಿರದಿದ್ದರೆ, ಮತ್ತೊಂದು ಪಕ್ಷದ ಪ್ರಾಥಮಿಕ ಸಂಪರ್ಕ ಅಥವಾ ಫೈಲ್‌ನಲ್ಲಿರುವ ಇತರ ವಿಳಾಸವನ್ನು ಸಂಬೋಧಿಸಬೇಕು). ಇಮೇಲ್‌ಗಳೆಂದರೆ ಲಿಖಿತ ಸೂಚನೆಗಳು. Google ನ ಕಾನೂನು ವಿಭಾಗಕ್ಕೆ ಕಳುಹಿಸುವ ಸೂಚನೆಗಳನ್ನು ಕಳುಹಿಸಬೇಕಾದ ಇಮೇಲ್ ವಿಳಾಸ legal-notices@google.com.  ಪ್ರಯಾಣ ಪಾಲುದಾರರಿಗೆ ಇತರ ಎಲ್ಲಾ ಸೂಚನೆಗಳನ್ನು ಲಿಖಿತವಾಗಿ ನೀಡಲಾಗುವುದು ಮತ್ತು ಪ್ರಯಾಣ ಪಾಲುದಾರರ ಖಾತೆಗೆ ಸಂಬಂಧಿಸಿದ ಇಮೇಲ್ ವಿಳಾಸಕ್ಕೆ ಕಳುಹಿಸಲಾಗುವುದು.  Google ಗೆ ಇತರ ಎಲ್ಲಾ ಸೂಚನೆಗಳನ್ನು ಲಿಖಿತವಾಗಿ ನೀಡಲಾಗುವುದು ಮತ್ತು ಇದನ್ನು Google ನಲ್ಲಿ ಪ್ರಯಾಣ ಪಾಲುದಾರರ ಪ್ರಾಥಮಿಕ ಸಂಪರ್ಕಕ್ಕೆ ಸಂಬೋಧಿಸಲಾಗುವುದು ಅಥವಾ Google ಲಭ್ಯಗೊಳಿಸಿದ ಇತರ ವಿಧಾನಕ್ಕೆ ಸಂಬೋಧಿಸಲಾಗುವುದು. ಲಿಖಿತವಾಗಿ ಅಥವಾ ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ಖಚಿತಪಡಿಸಿದಂತೆ ಸೂಚನೆಯು ತಲುಪಿದಾಗ, ಸೂಚನೆಯನ್ನು ನೀಡಲಾಗಿದೆ ಎಂಬುದಾಗಿ ಪರಿಗಣಿಸಲಾಗುತ್ತದೆ. ಈ ಸೂಚನೆ ಅವಶ್ಯಕತೆಗಳು ಪ್ರಕ್ರಿಯೆಯ ಕಾನೂನು ಸೇವೆಗೆ ಅನ್ವಯಿಸುವುದಿಲ್ಲ; ಇದು, ಅನ್ವಯವಾಗುವ ಕಾನೂನಿಗೆ ಒಳಪಟ್ಟಿರುತ್ತದೆ. (e) ಈ ನಿಯಮಗಳ ಅಡಿಯಲ್ಲಿ ಯಾವುದೇ ಹಕ್ಕುಗಳನ್ನು ಬಳಸದೆ (ಅಥವಾ ಬಳಸುವುದನ್ನು ವಿಳಂಬಗೊಳಿಸುವ ಮೂಲಕ), ಯಾವುದೇ ಪಕ್ಷವು ಯಾವುದೇ ಹಕ್ಕುಗಳನ್ನು ಮನ್ನಾ ಮಾಡಿದೆ ಎಂಬುದಾಗಿ ಪರಿಗಣಿಸಲಾಗುವುದಿಲ್ಲ. (f) ಈ ನಿಯಮಗಳ ಯಾವುದೇ ನಿಬಂಧನೆಯನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಕಂಡುಬಂದರೆ, ಆ ನಿಬಂಧನೆಯನ್ನು ಪ್ರತ್ಯೇಕಿಸಲಾಗುವುದು ಮತ್ತು ಉಳಿದ ನಿಯಮಗಳು ಪೂರ್ಣ ಪ್ರಭಾವ ಮತ್ತು ಪರಿಣಾಮಕಾರಿಯಾಗಿ ಜಾರಿಯಲ್ಲಿರುತ್ತವೆ. (g) Google ನಿಂದ ಪೂರ್ವ-ಲಿಖಿತ ಸಮ್ಮತಿ ಪಡೆಯದೆ, ಪ್ರಯಾಣ ಪಾಲುದಾರರು ಈ ನಿಯಮಗಳ ಅಡಿಯಲ್ಲಿ ತಮ್ಮ ಯಾವುದೇ ಹಕ್ಕುಗಳು ಅಥವಾ ಬಾಧ್ಯತೆಗಳನ್ನು ನಿಯೋಜಿಸುವಂತಿಲ್ಲ.  (h) ಈ ನಿಯಮಗಳಿಗೆ ಯಾವುದೇ ಥರ್ಡ್-ಪಾರ್ಟಿ ಫಲಾನುಭವಿಗಳಿರುವುದಿಲ್ಲ. (i) ಈ ನಿಯಮಗಳು, ಪಕ್ಷಗಳ ನಡುವೆ ಯಾವುದೇ ಏಜೆನ್ಸಿ, ಪಾಲುದಾರಿಕೆ, ಜಂಟಿ ಉದ್ಯಮ ಅಥವಾ ಉದ್ಯೋಗ ಸಂಬಂಧವನ್ನು ರಚಿಸುವುದಿಲ್ಲ. (j) ವಿಭಾಗಗಳು 1, 4, 6-10 ಮತ್ತು 12-13 ಈ ನಿಯಮಗಳ ಅವಧಿ ಮುಕ್ತಾಯ ಅಥವಾ ಕೊನೆಗೊಳಿಸುವಿಕೆಯನ್ನು ಮೀರಿ ಮುಂದುವರೆಯುತ್ತವೆ. (k) ಪಕ್ಷದ ಸೂಕ್ತ ನಿಯಂತ್ರಣವನ್ನು ಮೀರಿ ಉಂಟಾದ ಸನ್ನಿವೇಶಗಳಿಂದಾಗಿ ಉಂಟಾದ ವೈಫಲ್ಯ ಅಥವಾ ಕಾರ್ಯಕ್ಷಮತೆಯ ವಿಳಂಬದ ಮಟ್ಟಿಗೆ, ಯಾವುದೇ ಪಕ್ಷ ಅಥವಾ ಅದರ ಅಫಿಲಿಯೇಟ್‌ಗಳು ಬಾಧ್ಯಸ್ಥರಾಗಿರುವುದಿಲ್ಲ.